ಸೆಕ್ಯುರಿಟಿಗೆಂದು ಸಿಸಿಟಿವಿ ಹಾಕಿ ಪೇಚಿಗೆ ಸಿಲುಕಿದ ಮುದುಕ

ಲಕ್ನೋ, ಶನಿವಾರ, 4 ಮೇ 2019 (09:04 IST)

ಲಕ್ನೋ : ನಿವೃತ್ತ ಎಲ್‍ ಐಸಿ ಅಧಿಕಾರಿಯೊಬ್ಬ ಸೆಕ್ಯೂರಿಟಿಗೆಂದು ಸಿಸಿ ಕ್ಯಾಮರಾ ಫಿಕ್ಸ್ ಮಾಡಿ ತನ್ನ ನೀಚ ಕೃತ್ಯವನ್ನು ಬಟ್ಟಬಯಲು ಮಾಡಿಕೊಂಡ ಘಟನೆ  ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ವಿಮಲ್ ಚಂದ್ (62) ಎಂಬಾತ ನಿವೃತ್ತ ಎಲ್‍ ಐಸಿ ಅಧಿಕಾರಿಯಾಗಿದ್ದು, ಈತ ಸೆಕ್ಯೂರಿಟಿಗಾಗಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮನೆಗೆ ಸಿಸಿಟಿವಿ ಹಾಕಿಸಿದ್ದನು. ಆದರೆ ಸಿಸಿಟಿವಿ ಅಳವಡಿಸಿದ ವ್ಯಕ್ತಿ ಆಶು ಕಶ್ಯಪ್ ಎಂಬಾತ ಅದರ ಪಾಸ್‍ ವರ್ಡ್ ತಿಳಿದುಕೊಂಡು ಮೊಬೈಲ್‍ ಗೆ ಕನೆಕ್ಟ್ ಮಾಡಿಕೊಂಡು ಚಂದ್ ಮನೆಯಲ್ಲಿ ನಡೆಯುತ್ತಿದ್ದುದ್ದನ್ನು ನೋಡುತ್ತಿದ್ದನು.


ಇತ್ತ ಪತ್ನಿಯನ್ನು ಕಳೆದುಕೊಂಡ ವಿಮಲ್ ಚಂದ್ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರನ್ನು ಮನೆಗೆ ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನೆಲ್ಲಾ ನೋಡುತ್ತಿದ್ದ ಕಶ್ಯಪ್ ವಿಮಲ್ ಚಂದ್ ಗೆ 25 ಲಕ್ಷ ರೂಪಾಯಿ ನೀಡದೇ ಹೋದರೆ ಯುವತಿಯರಿಗೆ ನೀಡಿದ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡಲು ಶುರು ಮಾಡಿದ್ದಾನೆ.


ಆದರೆ ವಿಮಲ್ ಚಂದ್ ಹಣ ನೀಡದ ಹಿನ್ನಲೆಯಲ್ಲಿ ಕೋಪಗೊಂಡ ಕಶ್ಯಪ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ತಕ್ಷಣ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಬಂಧಿಸಿ ತನಿಖೆ ಶುರು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಮಾರ್ಟ್ ಫೋನ್ ನಿಂದ ಜನರನ್ನು ದೂರಮಾಡಲು ಲಂಡನ್ ಸಂಸ್ಥೆಯೊಂದು ಮಾಡಿದ್ದೇನು ಗೊತ್ತಾ?

ಲಂಡನ್ : ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಜನರನ್ನು ದೂರಮಾಡಲು ಲಂಡನ್ ನ ಸಂಸ್ಥೆಯೊಂದು ಹೊಸ ಪ್ರಯೋಗಕ್ಕೆ ...

news

ಸುಮಲತಾ ಜೊತೆ ಮಂಡ್ಯ ನಾಯಕರು ಊಟಕ್ಕೆ ಹೋಗಿರುವುದರಲ್ಲಿ ತಪ್ಪೇನಿದೆ- ಕೈ ಮುಖಂಡರ ಪರ ನಿಂತ ಜಮೀರ್

ಬೆಂಗಳೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಮಂಡ್ಯ ಕಾಂಗ್ರೆಸ್ ನಾಯಕರು ಊಟಕ್ಕೆ ...

news

ಮೋಜು ಮಸ್ತಿಗಾಗಿ ಬೆಕ್ಕಿನ ಮರಿಗಳ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ

ಮುಂಬೈ : ಮೋಜಿಗಾಗಿ ವ್ಯಕ್ತಿಯೊಬ್ಬ ಮೂರು ಬೆಕ್ಕಿನ ಮರಿಗಳನ್ನು ಜೀವಂತ ಸುಡಲು ಯತ್ನಸಿದ ಘಟನೆ ಮುಂಬೈನ ಮೀರಾ ...

news

ಈ ದೇಶದಲ್ಲಿ ಜನರು ಮದ್ಯಕ್ಕೂ ಚಿನ್ನ ಹಾಕಿಕೊಂಡು ಕುಡಿಯುತ್ತಾರಂತೆ!

ಮಯನ್ಮಾರ್ : ಹೆಚ್ಚಾಗಿ ಜನರು ಮದ್ಯವನ್ನು ಸೇವಿಸುವಾಗ ನೀರು ಅಥವಾ ಸೋಡಾ ಹಾಕಿಕೊಂಡು ಕುಡಿಯುತ್ತಾರೆ. ಆದರೆ ...