ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಕಚೇರಿಗಳಲ್ಲಿ ಅಧಿಕಾರಕ್ಕೆ ಬಂದು ನಿರಂತರ 20 ವರ್ಷ ಪೂರೈಸಿದ ಪ್ರಯುಕ್ತ ಬಿಜೆಪಿ ಅಕ್ಟೋಬರ್ 7ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಎರಡನೇ ಅವಧಿಗೆ ಪ್ರಧಾನಿಯಾಗಿ ಎರಡು ವರ್ಷ ಕಳೆಯುವವರೆಗೂ ಒಟ್ಟಾರೆ 20 ವರ್ಷಗಳ ಕಾಲ ನಿರಂತರ ಅಧಿಕಾರದಲ್ಲಿದ್ದಾರೆ ಮೋದಿ. ನದಿಗಳನ್ನು ಸ್ವಚ್ಛಗೊಳಿಸುವುದರೊಂದಿಗೆ ಸಂಭ್ರಮಾಚರಣೆ ಆರಂಭಿಸುವ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ.