ನವದೆಹಲಿ : ಲೋಕಸಭಾ ಚುನಾವಣೆ ಮುಂದಿದ್ದರೂ ಈ ಬಾರಿ ಯಾವುದೇ ಹೊಸ ಯೋಜನೆಗಳ ಘೋಷಣೆಯಿಲ್ಲ ಎಂದು ವಿತ್ತಸಚಿವೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಂಶದ ಬಳಿಕ ಮತ್ತೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಂಗಳವಾರ ಸರ್ವಪಕ್ಷ ಸಭೆ ಕರೆದು, ಅಧಿವೇಶನವನ್ನು ಸುಗಮವಾಗಿ ನಡೆಸಲು ಸರ್ವಪಕ್ಷಗಳ ಸಹಕಾರ ಕೋರಿದ್ದಾರೆ. ಜೊತೆಗೆ ಉಪಸಭಾಪತಿಯನ್ನು ಆಯ್ಕೆ ಮಾಡದೇ ನಡೆಸುತ್ತಿರುವ ಮೊದಲ ಲೋಕಸಭಾ ಅವಧಿಯಾಗಿ ಈ ಅವಧಿ ದಾಖಲಾಗಲಿದೆ.