ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡುತ್ತಿದ್ದ ಸಾವಿರಾರು ಪಾಕ್ ಮೂಲದ ಟ್ವಿಟರ್ ಖಾತೆಗಳು

ನವದೆಹಲಿ| Krishnaveni K| Last Modified ಸೋಮವಾರ, 8 ಫೆಬ್ರವರಿ 2021 (11:06 IST)
ನವದೆಹಲಿ: ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಶಾಂತಿ ಕದಡಲು ಯತ್ನಿಸುತ್ತಿರುವ ಪಾಕಿಸ್ತಾನ ಮೂಲದ ಟ್ವಿಟರ್ ಖಾತೆಗಳನ್ನು ಕಿತ್ತು ಹಾಕಲು ಟ್ವಿಟರ್ ಸಂಸ್ಥೆಗೆ ಕೇಂದ್ರ ಸರ್ಕಾರ ಪಟ್ಟಿ ನೀಡಿದೆ.

 

ರೈತ ಪ್ರತಿಭಟನೆ ವಿಚಾರದಲ್ಲಿ ಪ್ರಚೋದನಕಾರಿ ಟ್ವೀಟ್ ಮಾಡುತ್ತಿದ್ದ 1178 ಪಾಕ್ ಮೂಲದ ಟ್ವಿಟರ್ ಖಾತೆಗಳ ವಿವರವನ್ನು ಕೇಂದ್ರ ನೀಡಿದೆ. ಅಲ್ಲದೆ, ಈ ಖಾತೆಗಳನ್ನು ರದ್ದು ಮಾಡುವಂತೆ ಸೂಚನೆ ನೀಡಿದೆ. ಈಗಾಗಲೇ ಕೇಂದ್ರದ ಸೂಚನೆ ಮೇರೆಗೆ ಟ್ವಿಟರ್ ಪ್ರಚೋದನಕಾರಿ ಟ್ವೀಟ್ ಗಳನ್ನು ಡಿಲೀಟ್ ಮಾಡುವ ಕೆಲಸ ಮಾಡುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :