ನವದೆಹಲಿ|
Krishnaveni K|
Last Modified ಸೋಮವಾರ, 25 ಜನವರಿ 2021 (10:06 IST)
ನವದೆಹಲಿ: ತ್ರೇತಾಯುಗದಲ್ಲಿ ಸೀತಾಮಾತೆಯನ್ನು ರಾವಣನ ಸಾಮ್ರಾಜ್ಯದಿಂದ ಕರೆತರಲು ಶ್ರೀರಾಮ ಚಂದ್ರ ಕಪಿಗಳ ಸಹಾಯದಿಂದ ನಿರ್ಮಿಸಿದನೆಂದು ಹೇಳಲಾದ ರಾಮಸೇತುವಿನ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ.
ರಾಮ ಸೇತು ನಿರ್ಮಾಣವಾಗಿದ್ದು ಹೇಗೆ, ಇದನ್ನು ನಿಜವಾಗಿಯೂ ತ್ರೇತಾಯುಗದಲ್ಲೇ ನಿರ್ಮಿಸಲಾಯಿತೇ ಎಂಬ ಬಗ್ಗೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಗೋವಾದಲ್ಲಿನ ಸಮುದ್ರಶಾಸ್ತ್ರ ಸಂಸ್ಥೆ ಜಲಾಂತರ್ಗಾಮಿ ಸಂಶೋಧನೆ ನಡೆಸಲಿದೆ. ಈ ಸಂಶೋಧನೆಗೆ ಈಗ ಕೇಂದ್ರ ಅನುಮೋದನೆ ನೀಡಿದೆ.