ನವದೆಹಲಿ : ಜಿ20 ಶೃಂಗಸಭೆಯ ಮೊದಲ ದಿನ ಅಂತ್ಯಗೊಂಡಿದೆ. ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವ ನಾಯಕರು ಹಾಗೂ ಪ್ರತಿನಿಧಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದು, ಭಾರತದ ವೈವಿಧ್ಯಮಯ ಭಕ್ಷ್ಯಗಳನ್ನು ನೀಡಲಾಗಿದೆ. ರಾಷ್ಟ್ರದ ಹಾಗೂ ವಿಶ್ವದ ನಾಯಕರಿಗೆ ದೇಶದ ವಿಶಿಷ್ಟ ಭೋಜನದ ಅನುಭವವನ್ನು ನೀಡಲಾಗಿದೆ. ಬೆಳ್ಳಿ, ಚಿನ್ನ ಲೇಪಿತ ಪಾತ್ರೆಗಳಲ್ಲಿ ಊಟವನ್ನು ಬಡಿಸಿ, ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ನೋಟವನ್ನು ಪ್ರದರ್ಶಿಸಲಾಗಿದೆ.ಸಂಪ್ರದಾಯಗಳು, ಪದ್ಧತಿಗಳು ಹಾಗೂ ಹವಾಮಾನದ