ಉತ್ತರಾಖಂಡ ಹಿಮ ಸ್ಪೋಟ: ಸಾವಿನ ಸಂಖ್ಯೆ 100 ಕ್ಕೂ ಹೆಚ್ಚು ಸಾಧ್ಯತೆ

ಚಮೋಲಿ| Krishnaveni K| Last Updated: ಸೋಮವಾರ, 8 ಫೆಬ್ರವರಿ 2021 (09:33 IST)
ಚಮೋಲಿ: ಉತ್ತರಾಖಂಡದಲ್ಲಿ ನಿನ್ನೆ ಸಂಭವಿಸಿದ ಭಾರೀ ಹಿಮಸ್ಪೋಟದಲ್ಲಿ 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಸಾಧ‍್ಯತೆಯಿದೆ.

 

ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸಾಕಷ್ಟು ಜನ ನಾಪತ್ತೆಯಾಗಿದ್ದಾರೆ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಸೇರಿದಂತೆ ಗಡಿರಕ್ಷಣಾ ಪಡೆಗಳು, ವಾಯುಸೇನೆ ನಾಪತ್ತೆಯಾದವರ ಹುಡುಕಾಟದಲ್ಲಿ ತೊಡಗಿಸಿಕೊಂಡಿವೆ. ಮೃತರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಗೊಂಡವರ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :