ಬೆಂಗಳೂರು: ಭಾರತೀಯರು ಕುತೂಹಲದಿಂದ ಕಾಯುತ್ತಿದ್ದ ಚಂದ್ರಯಾನ 2 ಲ್ಯಾಂಡಿಂಗ್ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಇನ್ನೇನು ಚಂದ್ರನ ತಲುಪಲು 2.1 ಕಿ.ಮೀ. ದೂರವಿದೆ ಎನ್ನುವಾಗ ರೋವರ್ ವಿಕ್ರಮ ಸಂವಹನ ಕಡಿದುಕೊಂಡಿದೆ.ಇದರಿಂದಾಗಿ ನಿನ್ನೆ ಇನ್ನೇನು ಚಂದ್ರನ ನೆಲಮುಟ್ಟಲಿರುವ ಕ್ಷಣಗಳನ್ನು ನೋಡಲು ಕಾಯುತ್ತಿದ್ದ ಕೋಟ್ಯಂತರ ಭಾರತೀಯರ ನಿರೀಕ್ಷೆ ನಿರಾಸೆಯಲ್ಲಿ ಕೊನೆಯಾಯಿತು. ಪ್ರಧಾನಿ ಮೋದಿ ಕೂಡಾ ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಉಪಸ್ಥಿತರಿದ್ದರು.ಚಂದ್ರನ ಮೇಲ್ಮೈಯಿಂದ 30 ಕಿ.ಮೀ. ಎತ್ತರದಿಂದ ಕೆಳಗಿಳಿಯಲು ಆರಂಭಿಸಿದ