ಫೈಜಾಬಾದ್: ನವಜಾತ ಶಿಶುವೊಂದು ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಯ ಆಪರೇಷನ್ ಟೇಬಲ್ ಮೇಲಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆಯೊಂದು ನಡೆದಿದೆ. ಮಗುವಿನ ಸಾವಿಗೆ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಇತರ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ. ವೈದ್ಯರು ಮತ್ತು ನರ್ಸ್ಗಳು ಹೆರಿಗೆ ಮಾಡಿಸಲು ಹಣದ ಡಿಮ್ಯಾಂಡ್ ಮಾಡಿದ್ದರು. ಆದರೆ ನನ್ನಿಂದ ಹಣ ಪಾವತಿಸಲಾಗಲಿಲ್ಲ. ಹೀಗಾಗಿ ನನ್ನ ಪತ್ನಿಯ ಕಡೆಗೆ ಕಾಳಜಿ ವಹಿಸದ