ಸೂರತ್: ಸೂರತ್ನಲ್ಲಿರುವ ಪಂದೇಸಾರಾದಲ್ಲಿ 2 ವರ್ಷದ ಮಗುವಿನ ತಲೆ ಪ್ರೆಶರ್ ಕುಕ್ಕರ್ ನಲ್ಲಿ ಸಿಲುಕಿಕೋಂಡಿದ್ದು 12 ಗಂಟೆಗಳ ಬಳಿಕ ಮಗುವಿನ ತಲೆಯನ್ನ ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಪರಿ ಎಂಬ ಬಾಲಕಿ ಅಡುಗೆಮನೆಯಲ್ಲಿ ಪಾತ್ರೆಗಳ ಜೊತೆ ಆಟವಾಡುತ್ತಿದ್ದ ವೇಳೆ ಅಕಸ್ಮಿಕವಾಗಿ ಆಕೆಯ ತಲೆ ಕುಕ್ಕರ್ ನಲ್ಲಿ ಸಿಲುಕಿಕೊಂಡಿತ್ತು. ಜೋರಾಗಿ ಕಿರುಚುತ್ತಿದ್ದನ್ನು ಕೇಳಿದ ಪೋಷಕರು ಓಡಿ ಬಂದು ಮಗುವಿನ ತಲೆಗೆ ಸಿಕ್ಕಿಹಾಕಿಕೊಂಡಿದ್ದ ಕುಕ್ಕರ್ ತೆಗೆಯಲು ಪ್ರಯತ್ನಿಸಿದ್ದಾರೆ. ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಫಲರಾಗಲಿಲ್ಲ.