ಬೆಂಗಳೂರು: ಬೆಂಗಳೂರು ಮೂಲದ ದಂಪತಿಗೆ ನಾಲ್ಕು ತಿಂಗಳ ಮಗುವನ್ನು ಮಾರಾಟ ಮಾಡಲೆತ್ನಿಸಿದ ಮುಂಬೈ ಮೂಲದ ಆರೋಪಿಗಳ ಜಾಲವನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ದಂಪತಿ ಮತ್ತು ಇನ್ನೊಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕು ತಿಂಗಳ ಹೆಣ್ಣು ಮಗುವನ್ನು ಅಪಹರಿಸಿ 1.5 ಲಕ್ಷ ರೂ.ಗೆ ಬೆಂಗಳೂರು ಮೂಲದ ದಂಪತಿಗೆ ಮಾರಾಟ ಮಾಡಲು ಎಲ್ಲಾ ಸಿದ್ಧತೆ ನಡೆದಿತ್ತು.ಈ ಆರೋಪಿಗಳಿಗೆ ಮಗುವನ್ನು ಕದ್ದು ಹಣಕ್ಕಾಗಿ ಮಾರಾಟ ಮಾಡುವುದೇ ಕಸುಬಾಗಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.