ನವದೆಹಲಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ನಿರ್ಗಮಿಸುತ್ತಿದ್ದ ಪ್ರಧಾನಿ ಮೋದಿ ಅನಿರೀಕ್ಷಿತವಾಗಿ ಮಕ್ಕಳು ಮುತ್ತಿಕೊಂಡಾಗ ಗಲಿಬಿಲಿಗೊಂಡ ಪ್ರಸಂಗವೂ ನಡೆಯಿತು.ಭಾಷಣ ಮುಗಿಸಿ ತಮ್ಮ ಕಾರಿನತ್ತ ತೆರಳುತ್ತಿದ್ದ ಪ್ರಧಾನಿ ಮೋದಿಗೆ ಕಾರ್ಯಕ್ರಮದಲ್ಲಿ ಶಿಸ್ತುಬದ್ಧರಾಗಿ ಕುಳಿತಿದ್ದ ಮಕ್ಕಳು ಅಕ್ಷರಶಃ ಮುತ್ತಿಗೆ ಹಾಕಿದರು. ಪ್ರಧಾನಿ ಕೈಕುಲುಕಲು, ಸೆಲ್ಫೀ ತೆಗೆಯಲು ಮಕ್ಕಳು ಮುಗಿಬಿದ್ದರು.ಅರೆಕ್ಷಣ ಪ್ರಧಾನಿ ಮೋದಿ ಮಕ್ಕಳ ವರ್ತನೆಯಿಂದ ಗಲಿಬಿಲಿಗೊಂಡರೂ ನಂತರ ಸಾವರಿಸಿಕೊಂಡು ಅವರ ಅಭಿಲಾಷೆ ಪೂರೈಸಿದರು. ಕೊನೆಗೆ ಕಾರು ಹತ್ತುವ ಮುನ್ನ