ಕಳೆದ ಕೆಲವು ವರ್ಷಗಳಲ್ಲಿ ಚೀನಾದ ನಡವಳಿಕೆಯು ಕಳವಳಕಾರಿಯಾಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಆಕಸ್ ಒಪ್ಪಂದದ ಕುರಿತಾದ ಚರ್ಚೆಗೆ ಅಮೆರಿಕಕ್ಕೆ ಆಗಮಿಸಿರುವ ಅವರು, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಮೌಲ್ಯಗಳು ಬ್ರಿಟನ್ಗಿಂತಲೂ ಹೆಚ್ಚು ಭಿನ್ನವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಚೀನಾ ನಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದ್ದು, ಇಡೀ ವಿಶ್ವಕ್ಕೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆ ದೇಶವು ಮೂಲಭೂತವಾಗಿ ವಿಭಿನ್ನ ಮೌಲ್ಯಗಳನ್ನು ಹೊಂದಿದೆ ಮತ್ತು ಕಳೆದ ಕೆಲವು