ನೋಯ್ಡಾ: ಭಾರತದ ರಾಷ್ಟ್ರ ಧ್ವಜವನ್ನು ಹರಿದು ಕಸದ ಬುಟ್ಟಿಗೆ ಎಸೆದು ಅಪಮಾನವೆಸಗಿದ ಚೀನಾ ನಾಗರಿಕನಿಗೆ ತಕ್ಕ ಶಾಸ್ತಿಯಾಗಿದೆ. ಆತನನ್ನು ಮೊಬೈಲ್ ಸಂಸ್ಥೆ ಕೆಲಸದಿಂದ ವಜಾಗೊಳಿಸಿದೆ. ನೋಯ್ಡಾ ಬಳಿಯ ಒಪೊ ಮೊಬೈಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಭಾರತೀಯ ಧ್ವಜಕ್ಕೆ ಅಪಮಾನ ಎಸಗಿದ್ದ. ಕೃತ್ಯ ಬಯಲಾಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿ ಪ್ರತಿಭಟನೆ ನಡೆಸಿದರು. ಇದೀಗ ಒಪೊ ಸಂಸ್ಥೆ ಆತನನ್ನು ವಜಾಗೊಳಿಸಿದೆ. ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ಅದಕ್ಕಾಗಿ ಆತನನ್ನು