ಸಿಎಂ ಅರವಿಂದ್ ಕ್ರೇಜಿವಾಲ್ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಕೊಡುಗೆ

ನವದೆಹಲಿ| pavithra| Last Modified ಬುಧವಾರ, 30 ಅಕ್ಟೋಬರ್ 2019 (08:46 IST)
ನವದೆಹಲಿ : ದೀಪಾವಳಿ ಹಬ್ಬಕ್ಕೆ ದೆಹಲಿಯ ಮಹಿಳೆಯರಿಗೆ ಸಿಎಂ ಅರವಿಂದ್ ಕ್ರೇಜಿವಾಲ್ ಬಂಪರ್ ಕೊಡುಗೆ ನೀಡಿದ್ದು, ಸೋಮವಾರದಿಂದ ಮಹಿಳೆಯರಿಗೆ  ಕಲ್ಪಿಸಿದೆ.
ದೆಹಲಿ ಸಾರಿಗೆ ನಿಗಮ ಬಸ್ಸುಗಳು ಹಾಗೂ ಕಸ್ಟರ್ ಬಸ್ ಗಳಲ್ಲಿ ಮಹಿಳೆಯರಿಗೆ ಸರ್ಕಾರ ಉಚಿತ ಪ್ರಯಾಣ ಕಲ್ಪಿಸಿದ್ದು, ಈ ವೇಳೆ ಮಹಿಳೆಯರಿಗೆ ಗುಲಾಬಿ ಬಣ್ಣದ ಟಿಕೆಟ್ ನೀಡಲಾಗುವುದು. ಅದರ ಹಣವನ್ನು ಸಾರಿಗೆಗೆ  ಸರ್ಕಾರ ಮರುಪಾವತಿ ಮಾಡಲಿದೆ.
ಅಲ್ಲದೇ ದೆಹಲಿಯಲ್ಲಿ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ಬಸ್ ಗಳಲ್ಲಿ 13000 ಬಸ್ ಮಾರ್ಷಲ್ ಗಳನ್ನು ನೇಮಕ ಮಾಡಲಾಗಿದೆ ಎಂದು ಸಿಎಂ ಅರವಿಂದ್ ಕ್ರೇಜಿವಾಲ್ ತಿಳಿಸಿದ್ದರು.

ಇದರಲ್ಲಿ ಇನ್ನಷ್ಟು ಓದಿ :