ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ನಿನ್ನೆ ಚುನಾವಣಾ ಪ್ರಚಾರ ವೇಳೆ ನಂದಿಗ್ರಾಮದಲ್ಲಿ ತಮ್ಮ ಮೇಲೆ 3-4 ದುಷ್ಕರ್ಮಿಗಳಿಂದ ದಾಳಿ ನಡೆದಿದೆ ಎಂದಿದ್ದ ಮಮತಾ ಆರೋಪಿಸಿದ್ದರು. ಈ ಘಟನೆಯಲ್ಲಿ ತಮ್ಮ ಕಾಲು ಮುರಿದಿದ್ದು, ಎದೆನೋವಾಗ್ತಿದೆ ಎಂದು ಮಮತಾ ಹೇಳಿಕೊಂಡಿದ್ದಾರೆ. ನಂದಿಗ್ರಾಮದಲ್ಲಿ ಪ್ರಚಾರ ವೇಳೆ ಕೆಲವರು ತಳ್ಳಾಟ ನಡೆಸಿದ್ದಾರೆ. ಈ ವೇಳೆ ಮಮತಾ ಕಾಲು ಕಾರಿಗೆ ಬಡಿದು, ಗಾಯಗಳಾಗಿತ್ತು. ಆ ಬಳಿಕ ಮಮತಾ ಕೋಲ್ಕೊತ್ತಾಗೆ ಪ್ರಯಾಣ ಬೆಳೆಸಿದ್ದರು. ಇದು ತನ್ನ ವಿರುದ್ಧ ನಡೆದ ಉದ್ದೇಶಪೂರ್ವಕ