ರಾಜ್ಯ ಸರ್ಕಾರದ ಇದುವರೆಗಿನ ಅಭಿವೃದ್ಧಿ ವಿಷಯದ ಚರ್ಚೆಗೆ ಮಾಜಿ ಸಿಎಂ ಯಡಿಯೂರಪ್ಪಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ. 4 ವರ್ಷಗಳಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎಂದು ಹೇಳಿಕೊಂಡು ಬರುತ್ತಿರುವ ಯಡಿಯೂರಪ್ಪ ಒಂದೇ ವೇದಿಕೆಗೆ ಬರಲಿ. ಕೇಂದ್ರದ ನರೇಂದ್ರಮೋದಿ ಸರ್ಕಾರ ಯಾವ ಭರವಸೆ ನೀಡಿತ್ತು. ಎಷ್ಟು ಈಡೇರಿಸಿದೆ ಮತ್ತು ನಾವು ಏನೇನು ಭರವಸೆಯನ್ನ ನೀಡಿದ್ದೆವು. ಎಷ್ಟು ಈಡೇರಿಸಿದ್ದೇವೆ ಎಂಬುದನ್ನ ಬಹಿರಂಗವಾಗಿ ಚರ್ಚಿಸೋಣ ಎಂದು ಸವಾಲು ಹಾಕಿದ್ದಾರೆ.ಇದೇವೇಳೆ, ಶೋಭಾ ಕರಂದ್ಲಾಜೆ ತಾಳಮೇಳ ಇದ್ದಂಗೆ ಅಂತಾ