ಲಕ್ನೋ: ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಎಂ ಯೋಗಿ ಸರ್ಕಾರ ಹೊಸ ಕ್ರಮವೊಂದನ್ನು ಕೈಗೊಂಡಿದೆ.ಮಹಿಳೆಯರಿಗೆಂದೇ ಪಿಂಕ್ ಬಸ್ ಆರಂಭಿಸುತ್ತಿದೆ. ಅದೂ ಅಂತಿಂಥ ಬಸ್ ಅಲ್ಲ. ಹವಾನಿಯಂತ್ರಿತ ಬಸ್ ಪ್ರಾರಂಭಿಸಲಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ತನ್ನ ನಿರ್ಭಯಾ ಫಂಡ್ ನಿಂದ 50 ಬಸ್ ಗಳನ್ನು ನೀಡಲಿದೆ.ಈ ಬಸ್ ನಲ್ಲಿ ಕಂಡಕ್ಟರ್, ಡ್ರೈವರ್ ಎಲ್ಲರೂ ಮಹಿಳೆಯರೇ ಆಗಿರುತ್ತಾರೆ ಎಂದು ಸರ್ಕಾರ ಹೇಳಿದೆ.