ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಮಂತ್ರಿ ನರೇಂದ್ರ ಮೋದಿ ಓಲೈಕೆಗೆ ಮುಂದಾಗಿರುವುದು ಭಾರಿ ಟೀಕೆಗೆ ಕಾರಣವಾಗಿದೆ. ಸೆಪ್ಟೆಂಬರ್ 17 ಪ್ರಧಾನಿ ಮೋದಿಯ ಜನ್ಮದಿನವಾಗಿದ್ದು ರವಿವಾರ ಬರಲಿದೆ. ರವಿವಾರದಂದು ಸರಕಾರಿ ರಜೆ ಇರುತ್ತದೆ. ಆದರೆ, ಮುಖ್ಯಮಂತ್ರಿ ಯೋಗಿ, ರವಿವಾರದಂದು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲು ಆದೇಶ ನೀಡಿದ್ದಾರೆ. ಪ್ರಧಾನಿ ಮೋದಿ ಓಲೈಕೆಗಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಯಾವ ನ್ಯಾಯ ಎಂದು ವಿಪಕ್ಷಗಳು ಸಿಎಂ ಯೋಗಿ ನಡೆಯನ್ನು ಪ್ರಶ್ನಿಸಿವೆ. ಮುಖ್ಯಮಂತ್ರಿ