ನವದೆಹಲಿ : ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡೆನ್ಬರ್ಗ್ ರಿಸರ್ಚ್ ಮಾಡಿದ ವಂಚನೆಯ ಆರೋಪಗಳನ್ನು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ತಳ್ಳಿ ಹಾಕಿದ್ದು ನಿಯಂತ್ರಕರು ಈ ವಿಷಯವನ್ನು ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆರೋಪಗಳನ್ನು ಮಾಡುವುದು ಸುಲಭ. ಆರೋಪ ಸಾಬೀತಾಗುವವರೆಗೂ ನೀವು ನಿರಾಪರಾಧಿ. ಆಸ್ಟ್ರೇಲಿಯಾದಲ್ಲಿ ಅದಾನಿ ಸಮೂಹವು ತೋರಿಸಿದ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ ಎಂದರು.ಆಸ್ಟ್ರೇಲಿಯಾದಲ್ಲಿ ಶತಕೋಟಿ ಡಾಲರ್ ಅದಾನಿ ಹೂಡಿಕೆಯನ್ನು ಉಲ್ಲೇಖಿಸಿದ