ನಾಸಿಕ್ : ಹತ್ತು ರೂಪಾಯಿ ನಾಣ್ಯವೊಂದನ್ನು ನುಂಗಿ ನಾಲ್ಕು ವರ್ಷದ ಮಗುವೊಂದು ಮೃತಪಟ್ಟ ಘಟನೆ ಚಾಂದ್ಗಿರಿ ಪ್ರದೇಶದಲ್ಲಿ ನಡೆದಿದೆ. ತಿನ್ನಲು ಏನನ್ನಾದರೂ ಕೊಡುವಂತೆ ಮಗು ಕೇಳಿತ್ತು. ಆಗ ತಾಯಿ ಹತ್ತು ರೂಪಾಯಿ ನಾಣ್ಯ ಕೊಟ್ಟು ಅಂಗಡಿಯಲ್ಲಿ ಏನಾದರೂ ತೆಗೆದುಕೊಂಡು ತಿನ್ನಲು ಹೇಳಿದ್ದರು. ನಾಣ್ಯದೊಂದಿಗೆ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಅದನ್ನು ನುಂಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪಾಲಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಮಗು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದೆ. ತಾಜಾ ಸುದ್ದಿಗಳನ್ನು