ಅಸ್ಸಾಂ :ಭಾರತ್ ಜೋಡೊ ನ್ಯಾಯ್ ಯಾತ್ರಾದಲ್ಲಿ ಪಾಲ್ಗೊಂಡು ಜನರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂದಿ ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕೆಂದು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ನಮ್ಮ ಯುದ್ದವು ಆರ್ಎಸ್ಎಸ್ ಮತ್ತು ಬಿಜೆಪಿ ಜನರ ಹೃದಯದಲ್ಲಿರುವ ದ್ವೇಷದ ವಿರುದ್ದವಾಗಿದೆ ಎಂದು ನುಡಿದ ರಾಹುಲ್ ಗಾಂಧಿ, ಅವರು ದ್ವೇಷದ ಮತ್ತು ಬೆದರಿಕೆಯಿಂದ ರಾಜಕಾರಣ ನಡೆಸುತ್ತಿದ್ದಾರೆ. ಇದನ್ನು ಹೋಗಲಾಡಿಸಲು ನಾವು ಮಣಿಪುರದಿಂದ ಆರಂಭಿಸಿ ಜಾರ್ಖಂಡ್ ವರೆಗೆ ಯಾತ್ರೆ ನಡೆಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.