ನವದೆಹಲಿ : ಸಾರ್ವತ್ರಿಕ ಚುನಾವಣೆ ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಂಡಿರುವ ಬಿಜೆಪಿ, ಸೀಟ್ ನಿಗದಿ ಸಂಬಂಧ ಆಂತರಿಕ ಕಸರತ್ತನ್ನು ತೀವ್ರಗೊಳಿಸಿದೆ. ಪಕ್ಷದಿಂದ ಟಿಕೆಟ್ ನೀಡಿಕೆಗೆ ಅರ್ಹತೆ, ಮಾನದಂಡ, ಅನುಸರಿಸಬೇಕಾದ ವಿಧಾನಗಳನ್ನ ಅಖೈರು ಮಾಡುವ ಸಂಬಂಧ ಮಹತ್ವದ ಸಭೆ ನಡೆಸಿದೆ. ಹಾಲಿ ಸಂಸದರ ಕಾರ್ಯವೈಖರಿ, ರಿಪೋರ್ಟ್ ಕಾರ್ಡನ್ನ ಪರಿಶೀಲಿಸಿದೆ. ವಿವಿಧ ಏಜೆನ್ಸಿಗಳ ಮೂಲಕ ಕ್ಷೇತ್ರ ಮಾಹಿತಿ ತರಿಸಿಕೊಂಡು ಆಂತರಿಕ ಸಮೀಕ್ಷೆಗಳ ಜೊತೆ ತಾಳೆ ಹಾಕ್ತಿದೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವಾಗ ಕೇವಲ ಕಾರ್ಯವೈಖರಿಯನ್ನಷ್ಟೇ