ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಚೋದಿತ ಆರೋಪ ಮಾಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದ್ದಕ್ಕೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಕೋಪಗೊಂಡ ಘಟನೆ ನಡೆದಿದೆ. ಗುಜರಾತ್ ನಲ್ಲಿ ಬಿಜೆಪಿ ಸೋಲಿಸಲು ಪಾಕಿಸ್ತಾನ ಜತೆ ಕಾಂಗ್ರೆಸ್ ಪಕ್ಷ ರಹಸ್ಯ ಸಭೆಯೊಂದನ್ನು ನಡೆಸಿತ್ತು, ಅದರಲ್ಲಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು ಎಂದು ನರೇಂದ್ರ ಮೋದಿ ಚುನಾವಣೆಯ ಬಹಿರಂಗಸಭೆಯಲ್ಲಿ ಆರೋಪಿಸಿದ್ದರು. ಸದನದೊಳಗೆ