Widgets Magazine

ಬೆಂಕಿ ಹಾಕಲು ಪೆಟ್ರೋಲ್ ರೆಡಿ ಮಾಡ್ಕೊಳ್ಳಿ ಎಂದು ಕರೆ ನೀಡಿದ ಕಾಂಗ್ರೆಸ್ ನಾಯಕ

ನವದೆಹಲಿ| Krishnaveni K| Last Modified ಶುಕ್ರವಾರ, 27 ಡಿಸೆಂಬರ್ 2019 (09:45 IST)
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

 
ಒಡಿಶಾ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಪ್ರದೀಪ್ ಮಾಝಿ ಎಂಬವರು ಸೂಚನೆ ನೀಡಿದಾಗ ಬೆಂಕಿ ಹಚ್ಚಲು ಪೆಟ್ರೋಲ್ ರೆಡಿ ಮಾಡಿಟ್ಟುಕೊಳ್ಳಿ ಎಂದು ತಮ್ಮ ಬೆಂಬಲಿಗರಿಗೆ ಪ್ರಚೋದನಕಾರಿ ಸೂಚನೆ ನೀಡಿದ್ದಾರೆ.
 
ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಎಸಗಿದ ಪ್ರಕರಣದ ವಿರುದ್ಧ ಆಕ್ರೋಸ ವ್ಯಕ್ತಪಡಿಸಿ 12 ಗಂಟೆಗಳ ಬಂದ್ ಆಚರಣೆ ಮಾಡಲಾಯಿತು. ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಬಂದ್ ಆಚರಣೆ ವೇಳೆ ಯಾವುದೇ ಕ್ಷಣದಲ್ಲೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲು ಸಿದ್ಧರಾಗಿ ಎಂದು ಮಾಜಿ ಸಂಸದ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :