ನವದೆಹಲಿ: ಗೂಬೆ, ನರಿ, ನಾಯಿ ಮುಂತಾದ ಪ್ರಾಣಿಗಳೆಲ್ಲಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡಲು ಒಂದಾಗಿವೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ಕಾಂಗ್ರೆಸ್ ನ್ನು ಕೆರಳಿಸಿದೆ.ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಬಿಜೆಪಿ ಅಧ್ಯಕ್ಷನ ಮೇಲೆ ಕಾಂಗ್ರೆಸ್ ಕಿಡಿ ಕಾರಿದೆ. ಅಮಿತ್ ಶಾ ಪ್ರಯೋಗಿಸದ ಭಾಷೆ ಗಮನಿಸಿದರೆ ಅವರು ಯುದ್ಧ ಶುರುವಾಗುವ ಮೊದಲೇ ಸೋತ ಪಕ್ಷದ ನಾಯಕ ಎಂದು ಅನಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಾಜ್ ದೀಪ್ ಸುರ್ಜೇವಾಲ್ ಕಿಡಿ