ಮೋದಿಯ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಬೇಕಾದರೆ ಇಂಡಿಯಾ ಒಕ್ಕೂಟದಲ್ಲಿ ಒಡಕುಧ್ವನಿಗಳ ಆಟಾಟೋಪ ಮೊದಲು ನಿಲ್ಲಬೇಕು. ಸದ್ಯ ಈಗ ಬರೀ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದ್ದನ್ನೆ ಎತ್ತೆತ್ತಿ ತೋರಿಸುವ ಇಂಡಿಯಾ ಕೂಟದ ಒಂದಷ್ಟು ಮಿತ್ರಪಕ್ಷಗಳ ನಡೆಯಿಂದ, ಎನ್ಡಿಎ ಮೈತ್ರಿಕೂಟಕ್ಕೆ ಇನ್ನಷ್ಟು ಹುಮ್ಮಸ್ಸು ಬರೋದ್ರಲ್ಲಿ ಡೌಟೇ ಇಲ್ಲ.....! ಸೋಲು ಯಾವತ್ತು ಕಂಗೆಡಿಸಬಾರದು, ಸೋತಾಗ ಮೈ ಕೆಡವಿ ಎದ್ದು ನಿಲ್ಲಬೇಕು. ಅದು ಬಿಟ್ಟು ಬರೀ ಸೋಲಿನ ಜಪ ಮಾಡುತ್ತಾ, ಇಡೀ ಪಕ್ಷದ ಆತ್ಮವಿಶ್ವಾಸವನ್ನು