ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಆಂತರಿಕವಾಗಿಯೇ ಅಪಸ್ವರಗಳು ಕೇಳಿ ಬರುತ್ತಲೇ ಇರುತ್ತವೆ. ಪ್ರಿಯಾಂಕಾರನ್ನು ಕರೆ ತನ್ನಿ ಎಂಬ ಒತ್ತಾಯಗಳು ಆಗಾಗ ಹರಿದು ಬರುತ್ತಿರುತ್ತವೆ. ಮತ್ತೀಗ ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕ ಶೈಲೇಶ್ ಚೌಬೆ ಪಕ್ಷದ ಅಧ್ಯಕ್ಷೆ, ರಾಹುಲ್ ಗಾಂಧಿ ತಾಯಿ, ಸೋನಿಯಾ ಗಾಂಧಿ ಅವರಿಗೆ ರಾಹುಲ್ ಅವರನ್ನು ಪಕ್ಷದ ಉಪಾಧ್ಯಕ್ಷನ ಸ್ಥಾನದಿಂದ ಪದಚ್ಯುತಗೊಳಿಸಿ ಎಂದು ಒತ್ತಾಯಿಸಿದ್ದಾರೆ. ರಾಹುಲ್ ಅವರಿಗೆ ರಾಜಕೀಯ ಒಗ್ಗದು, ಅವರು ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ ಎಂದು ಅವರು ಸೋನಿಯಾರಿಗೆ ವಿಡಿಯೋ ಸಂದೇಶ ಕಳುಹಿಸಿದ್ದಾರೆ.