ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೀಡಿದ ತಂತ್ರಗಾರಿಕೆ ಆಧರಿಸಿ ಕಾಂಗ್ರೆಸ್ ತನ್ನ 2024ರ ಲೋಕಸಭಾ ಚುನಾವಣೆಗೆ ಚಾಲನೆ ನೀಡಿದ್ದು, 8 ಸದಸ್ಯರ ಕಾರ್ಯಪಡೆ ರಚಿಸಿದೆ. ಪ್ರಶಾಂತ್ ಕಿಶೋರ್ ನೀಡಿದ ವರದಿ ಆಧರಿಸಿ 8 ಸದಸ್ಯರ ಮಾರ್ಗದರ್ಶಿ ತಂಡ ಯೋಜನೆ ರೂಪಿಸಿದ್ದು, ಇವರ ಶಿಫಾರಸು ಆಧರಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಕಾರ್ಯತಂತ್ರ ಜಾರಿಗೆ ಆದೇಶ ಹೊರಡಿಸಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಈ ವಿಷಯ ಪ್ರಕಟಿಸಿದ್ದು, ಮೇ