ತಿರುವನಂತಪುರಂ: ಶಬರಿಮಲೆಯಲ್ಲಿ ಮಹಿಳೆಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ನಡೆಯುತ್ತಿರುವ ಪ್ರತಿಭಟನೆ ಜೋರಾಗುತ್ತಿರುವ ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ಮಾಡಬೇಕೋ ಬೇಡವೋ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳದ ರಮೇಶ್ ಚೆನ್ನಿತ್ತಲ ಈ ವಿವಾದವನ್ನು ನಮ್ಮ ಸರ್ಕಾರವಿದ್ದರೆ ಬೇರೆಯದೇ ರೀತಿಯಲ್ಲಿ ನಿಭಾಯಿಸುತ್ತಿತ್ತು ಎಂದಿದ್ದಾರೆ.ಶಬರಿಮಲೆ ಟೂರಿಸ್ಟ್ ಸ್ಥಳವಲ್ಲ. ಅಲ್ಲಿಗೆ ಭಕ್ತರು ಮಾತ್ರ ಹೋಗುತ್ತಾರೆ. ಇದೀಗ ಕೇರಳ ಪೊಲೀಸರು ನಿಭಾಯಿಸುತ್ತಿರುವ ರೀತಿಯೇ ಸರಿಯಲ್ಲ. ನಮ್ಮ ಸರ್ಕಾರವಿದ್ದಿದ್ದರೆ ಭಕ್ತರೊಂದಿಗೆ