Widgets Magazine

ನಟಿ ಪ್ರಿಯಾಂಕ ಚೋಪ್ರಾ ಗೆ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್ ಪಕ್ಷ

ಮುಂಬೈ| pavithra| Last Modified ಶುಕ್ರವಾರ, 13 ಜುಲೈ 2018 (14:05 IST)
ಮುಂಬೈ : ರಾಜಕೀಯ ನಾಯಕರು ಮಾಡುವ ಭರದಿಂದ ಎಡವಿ ಅಪಹಾಸ್ಯಕ್ಕೆ ಗುರಿಯಾಗಿರುವುದನ್ನು ನಾವು ಹಲವು ಬಾರಿ ಕೇಳಿರುತ್ತೇವೆ. ಅದೇರೀತಿ ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಹೆಸರಿನಲ್ಲಿ ಎಡವಟ್ಟುವೊಂದನ್ನು
ಮಾಡಿಕೊಂಡು ಅಪಹಾಸ್ಯಕ್ಕೆ ಗುರಿಯಾಗಿದೆ.ಗುರುವಾರ ಸಂಜೆ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಲೈವ್ ಆಗಿ, ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆಂದು ದೂರಿದ್ದಾರೆ. ಹಾಗೇ ಯುಪಿಎ ಆಡಳಿತಾವಧಿಯಲ್ಲಿ ದೇಶಾದ್ಯಂತ 1141 ಮಣ್ಣು ಪರೀಕ್ಷಾ ಲ್ಯಾಬ್​ಗಳಿದ್ದವು ಎಂದು ತಿಳಿಸಿದ್ದಾರೆ.


ಆದರೆ ಈ ಟ್ವೀಟ್​ ಅನ್ನು ಬಿಜೆಪಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರಿಗೆ ಟ್ಯಾಗ್​ ಮಾಡಬೇಕಿದ್ದವರು ಬಾಲಿವುಡ್ ನಟಿ​ ಪ್ರಿಯಾಂಕ ಚೋಪ್ರಾ ಅವರಿಗೆ ಟ್ಯಾಗ್ ಮಾಡಿ ಎಲ್ಲರ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಈ ತಪ್ಪು ಗಮನಕ್ಕೆ ಬಂದ ತಕ್ಷಣವೇ ಕಾಂಗ್ರೆಸ್​ ಈ
ಟ್ವೀಟ್ ನ್ನು ಡಿಲೀಟ್ ಮಾಡಿತಾದರೂ ಈ ಯಡವಟ್ಟಿನಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಂದಲೂ ಅಪಹಾಸ್ಯಕ್ಕೆ ಒಳಗಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :