ನವದೆಹಲಿ: ಪ್ರಧಾನಿ ಮೋದಿಗೆ ಇತಿಹಾಸದ ಬಗ್ಗೆ ಗೌರವವಿಲ್ಲ. ಅದು ಸಾಲದೆಂಬಂತೆ ತಮಗೆ ತೋಚಿದ ಹಾಗೆ ಇತಿಹಾಸ ತಿರುಚಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.ಮೋದಿಯ ಈ ಇದಮಿತ್ತಂ ಗುಣ ರಾಷ್ಟ್ರಕ್ಕೇ ಕಳವಳಕಾರಿಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಶುದ್ಧ ಸುಳ್ಳು ಮತ್ತು ತಪ್ಪಾದ ಅಂಕಿ ಅಂಶಗಳನ್ನು ನೀಡುತ್ತಾರೆ ಎಂದು ಪ್ರಧಾನಿ ವಿರುದ್ಧ ಅವರು ಆರೋಪ ಮಾಡಿದ್ದಾರೆ.ಪ್ರಧಾನಿ ಹುದ್ದೆ ಎನ್ನುವುದು ಒಂದು ಪಕ್ಷಕ್ಕೆ ಸೀಮಿತವಲ್ಲ, ಇಡೀ ರಾಷ್ಟ್ರಕ್ಕೆ ಸೇರಿದುದು. ಅವರ