ಹಿಮಾಚಲಪ್ರದೇಶ ‘ಕೈ’ ತಪ್ಪಿ ಹೋಯ್ತೇ?

ನವದೆಹಲಿ| Krishnaveni| Last Modified ಸೋಮವಾರ, 18 ಡಿಸೆಂಬರ್ 2017 (09:58 IST)
ನವದೆಹಲಿ: ಅತ್ತ ಗುಜರಾತ್ ನಲ್ಲಿ ಗೆದ್ದೇ ಗೆಲ್ಲಬೇಕೆಂಬ ಹಠದಲ್ಲಿ ಕಾಂಗ್ರೆಸ್ ತನ್ನ ಹಿಡಿತದಲ್ಲಿದ್ದ ಹಿಮಾಚಲಪ್ರದೇಶವನ್ನು ಕಳೆದುಕೊಳ್ಳುವುದರಲ್ಲಿದೆಯೇ? ಈಗಿನ ವರದಿ ಪ್ರಕಾರ ಬಿಜೆಪಿ ಸ್ಪಷ್ಟ ಬಹುಮತದತ್ತ ಮುನ್ನಡೆ ಸಾಧಿಸಿದೆ.

ಒಟ್ಟು 68 ಕ್ಷೇತ್ರಗಳ ಪೈಕಿ ಬಿಜೆಪಿ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಆಡಳಿತಾರೂಢ ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 5 ಸ್ಥಾನಗಳಲ್ಲಿ ಲೀಡ್ ಮಾಡ್ತಿದ್ದಾರೆ.ಆಂತಕರಿಕ ಕಚ್ಚಾಟದಿಂದಾಗಿ ವೀರಭದ್ರಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲ್ಲಿ ಅಧಿಕಾರ ಕಳೆದುಕೊಳ್ಳುವ ಸೂಚನೆ ಕಾಣುತ್ತಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್ ಕೂಡಾ ಗುಜರಾತ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದು ಹಿಮಾಚಲಪ್ರದೇಶದಲ್ಲಿ ಕಮಲ ಅರಳಲು ಕಾರಣವಾಗುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :