ನವದೆಹಲಿ: ಹುಟ್ಟುವಾಗಲೇ ಎರಡು ತಲೆಗಳು ಒಟ್ಟಿಗೆ ಜೋಡಣೆಯಾಗಿದ್ದ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವಲ್ಲಿ ದೆಹಲಿ ಏಮ್ಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಎರಡೂವರೆ ವರ್ಷದ ಜಗನ್ನಾಥ್ ಹಾಗೂ ಬಲರಾಮ್ ಎಂಬ ಅವಳಿ ಮಕ್ಕಳು ಹುಟ್ಟುತ್ತಲೇ ದೇಹ ಬೇರೆ-ಬೇರೆಯಾಗಿದ್ದು ತಲೆಗಳು ಪರಸ್ಪರ ಅಂಟಿಕೊಂಡಿದ್ದವು. ಈ ಮಕ್ಕಳು ಒಡಿಶಾದ ಕಂಧಾಮಲ್ ಜಿಲ್ಲೆಯ ಕೃಷಿ ದಂಪತಿಯ ಮಕ್ಕಳಾಗಿದ್ದು, ಜುಲೈ 14ರಂದು ಭುವನೇಶ್ವರದಿಂದ ದೆಹಲಿಗೆ ಚಿಕಿತ್ಸೆಗೆ ಕರೆ ತರಲಾಗಿತ್ತು.ನಿನ್ನೆ(ಅ.25) ಬೆಳಗ್ಗೆ 6 ಗಂಟೆಗೆ ಇಬ್ಬರನ್ನೂ