ಚಂಡೀಗಢ : ತಾಯಿಯನ್ನು ಕಳೆದುಕೊಂಡ ಮಗಳಿಗೆ ತಂದೆಯೇ ತಾಯಿಯ ಪ್ರೀತಿಯನ್ನು ನೀಡಬೇಕು. ಆದರೆ ಹರಿಯಾಣದ ಗುರುಗ್ರಾಮದಲ್ಲಿ ತಾಯಿಯನ್ನು ಕಳೆದುಕೊಂಡ 8 ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸಂತ್ರಸ್ತ ಬಾಲಕಿ ತಾಯಿ ಸಾವನಪ್ಪಿದ ಕಾರಣ ತಂದೆಯ ಜೊತೆ ವಾಸವಾಗಿದ್ದಳು. ಆದರೆ ಆಕೆಯ ತಂದೆ ಕುಡಿದು ಬಂದು ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ವರ್ತನೆಯಲ್ಲಿ ವ್ಯತ್ಯಾಸ ಕಂಡ ನೆರೆಹೊರೆಯವರು