ನವದೆಹಲಿ: ಕೊರೋನಾ ಎರಡನೇ ಅಲೆ ಈ ತಿಂಗಳಲ್ಲಿ ಮಾರಕವಾಗಬಹುದು. ಕಳೆದ ತಿಂಗಳಿಗಿಂತಲೂ ಅಧಿಕ ಸೋಂಕು ಈ ತಿಂಗಳು ಕಾಣಿಸಿಕೊಳ್ಳಬಹುದು ಎಂದು ದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.ದೇಶದಲ್ಲಿ ಮತ್ತೆ ಕೊರೋನಾ ತಾಂಡವವಾಡುತ್ತಿದ್ದು, ಈ ಪರಿಸ್ಥಿತಿ ಈ ತಿಂಗಳು ಇನ್ನಷ್ಟು ಬಿಗಡಾಯಿಸಬಹುದು. ಈಗಾಗಲೇ ಚಿಂತಾಜನಕ ಸ್ಥಿತಿಗೆ ತಲುಪಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.ಹೀಗಾಗಿ ಜನರು ಅತೀವ ಎಚ್ಚರಿಕೆ, ನಿಯಮ ಪಾಲಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್ ಬಳಕೆ, ಸಾಮಾಜಿಕ