ಕೊರೋನಾ ಪ್ರಕರಣದಲ್ಲಿ ತುಸು ಏರಿಕೆ

ನವದೆಹಲಿ| Krishnaveni K| Last Modified ಶುಕ್ರವಾರ, 11 ಜೂನ್ 2021 (11:08 IST)
ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೇ ಕೊರೋನಾ ಪ್ರಕರಣಗಳೂ ಏರಿಕೆಯಾಗಿದೆ.  
> ಕಳೆದ 24 ಗಂಟೆ ಅವಧಿಯಲ್ಲಿ 90 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದು, 3,403 ಸಾವಾಗಿದೆ. ಇದು ಕಳೆದ ಒಂದು ವಾರದಲ್ಲಿ ಗರಿಷ್ಠ ಪ್ರಕರಣವಾಗಿದೆ. ಕಳೆದ ವಾರ 80 ಸಾವಿರ ಆಸುಪಾಸಿನಲ್ಲಿ ಪ್ರಕರಣ ಕಂಡುಬಂದು ತುಸು ನೆಮ್ಮದಿ ತಂದಿತ್ತು.>   ಆದರೆ ಈಗ ಕೆಲವು ರಾಜ್ಯಗಳಲ್ಲಿ ಅನ್ ಲಾಕ್ ಆಗಿದ್ದು, ಮತ್ತೆ ಕೆಲವು ರಾಜ್ಯಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆನ್ನಲ್ಲೇ ಪ್ರಕರಣ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.ಇದರಲ್ಲಿ ಇನ್ನಷ್ಟು ಓದಿ :