ಉತ್ತರ ಪ್ರದೇಶದ ಮಥುರಾದಲ್ಲಿ ವಿಚಿತ್ರ ರೀತಿಯ ಜ್ವರ ಕಾಣಿಸಿಕೊಂಡಿದ್ದು ಕಳೆದ 1 ವಾರದಲ್ಲಿ ಕೋನ್ ಎಂಬ ಗ್ರಾಮದಲ್ಲಿ ಐವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಥುರಾ, ಆಗ್ರಾದ ವಿವಿಧ ಆಸ್ಪತ್ರೆಯಲ್ಲಿ ಈವರೆಗೆ 80ಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ. ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಸೋಮವಾರ ಇದೇ ಜ್ವರದಿಂದ 9 ವರ್ಷದ ಸೇವಕ್ ಹಾಗೂ 6 ವರ್ಷದ ಹನಿ ಎಂಬ ಮಕ್ಕಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.