Widgets Magazine

ಭಾರತದಲ್ಲಿ ಒಂದೇ ದಿನ 5,611 ಜನರಲ್ಲಿ ಕೊರೊನಾ ಸೋಂಕು

ನವದೆಹಲಿ| pavithra| Last Modified ಬುಧವಾರ, 20 ಮೇ 2020 (10:34 IST)

ನವದೆಹಲಿ : ಭಾರತದಲ್ಲಿ ದಿನೇ ದಿನೇ ಕೊರೊನಾ ಹೆಮ್ಮಾರಿ ಅಟ್ಟಹಾಸ ಮೇರೆಯುತ್ತಿದ್ದು, ಒಂದೇ ದಿನ 5,611 ಜನರಲ್ಲಿ  ಕೊರೊನಾ ಸೋಂಕು ತಗುಲಿದೆ.

 

24 ಗಂಟೆ ಅವಧಿಯಲ್ಲಿ 140 ಜನರು ಕೊರೊನಾಗೆ ಬಲಿಯಾಗಿದ್ದು, ಭಾರತದಲ್ಲಿ ಈವರೆಗೆ ಕೊರೊನಾಗೆ 3,303 ಜನರು ಸಾವನಪ್ಪಿದ್ದಾರೆ.

 

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,750ಕ್ಕೇರಿಕೆ. ಹಾಗೇ ದೇಶದಲ್ಲಿ ಕೊರೊನಾ ಸೋಂಕಿತ 42,298 ಜನ ಗುಣಮುಖರಾಗಿದ್ದಾರೆ.ಅಲ್ಲದೇ  61,149 ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 
ಇದರಲ್ಲಿ ಇನ್ನಷ್ಟು ಓದಿ :