ಕೊರೋನಾಗೆ ಆಕ್ಸಿಜನ್ ಪಡೆದವರಿಗೆ ಕಾಡುತ್ತದಂತೆ ಈ ಸಮಸ್ಯೆ!

ನವದೆಹಲಿ| Krishnaveni K| Last Modified ಶುಕ್ರವಾರ, 11 ಜೂನ್ 2021 (09:33 IST)
ನವದೆಹಲಿ: ಕೊರೋನಾ ಸೋಂಕಿನ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಯಾಗಿ ಆಕ್ಸಿಜನ್ ವ್ಯವಸ್ಥೆ ಅಳವಡಿಸಿ ಚಿಕಿತ್ಸೆಗೊಳಗಾದವರಿಗೆ ಮೆದುಳಿನಲ್ಲಿ ಈ ಸಮಸ್ಯೆ ಕಾಡುತ್ತದೆ ಎಂದು ನರರೋಗ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.
 > ತೀರಾ ವಿಷಮ ಸ್ಥಿತಿಯಲ್ಲಿ ಕೊರೋನಾಗೆ ಸುದೀರ್ಘ ಕಾಲದವರೆಗೆ ಆಕ್ಸಿಜನ್ ಅಳವಡಿಸಿ ಚಿಕಿತ್ಸೆ ಪಡೆದವರಿಗೆ ಮೆದುಳಿನ ಬೂದು ದ್ರವ್ಯ (ಗ್ರೇ ಮ್ಯಾಟರ್) ಕಡಿಮೆಯಾಗುವ ಸಮಸ್ಯೆ ಬರುತ್ತದೆ ಎಂದು ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯ ನರರೋಗ ತಜ್ಞರು ಸಂಶೋಧನೆ ನಡೆಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.>   ಬೂದು ದ್ರವ್ಯ ಎನ್ನುವುದು ನಮ್ಮ ಮೆದುಳಿನಲ್ಲಿ ಸಂದೇಶ ವಾಹಕವಾಗಿ ಕೆಲಸ ಮಾಡುತ್ತದೆ. ಅಲ್ಲದೆ, ವ್ಯಕ್ತಿಯ ಚಲನೆ, ಭಾವನೆ, ನೆನಪಿನ ಶಕ್ತಿಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಬೂದು ದ್ರವ್ಯ ಕಡಿಮೆಯಾದರೆ ಮನುಷ್ಯನಿಗೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :