ಮೂರನೇ ಅಲೆ: ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಏಮ್ಸ್ ಮುಖ್ಯಸ್ಥ

ನವದೆಹಲಿ| Krishnaveni K| Last Modified ಬುಧವಾರ, 9 ಜೂನ್ 2021 (09:16 IST)
ನವದೆಹಲಿ: ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ಇದುವರೆಗೆ ತಜ್ಞರು ಎಚ್ಚರಿಸುತ್ತಲೇ ಇದ್ದರು. ಆದರೆ ಇದೀಗ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಸಮಾಧಾನಕರ ವಿಚಾರವೊಂದನ್ನು ಹೇಳಿದ್ದಾರೆ.

 
ಮೂರನೇ ಅಲೆಯಲ್ಲೂ ಕೊರೋನಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರದು. ಇದುವರೆಗೆ ದೇಶೀಯವಾಗಿ ಅಥವಾ ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನವಾಗಲೀ ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು ಎನ್ನುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ.
 
ಎರಡನೇ ಅಲೆಯಲ್ಲೂ ಕೊರೋನಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿಲ್ಲ. ಮಕ್ಕಳಿಗೆ ಕೊರೋನಾ ಬಂದಿದ್ದರೂ ಕಡಿಮೆ ಲಕ್ಷಣಗಳಿತ್ತಷ್ಟೇ. ಮುಂದೆಯೂ ಇದೇ ರೀತಿ ಇರಬಹುದು ಎಂದು ರಣದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :