ಮೆಜಿಸ್ಟಿಕ್ ನಲ್ಲಿ ಸುತ್ತಾಡುತ್ತಿರುವ ದುಬೈ ನಿಂದ ಬೆಂಗಳೂರಿಗೆ ಬಂದಿದ್ದ ಕೊರೊನಾ ಶಂಕಿತ ವ್ಯಕ್ತಿ

ಬೆಂಗಳೂರು| pavithra| Last Updated: ಸೋಮವಾರ, 23 ಮಾರ್ಚ್ 2020 (11:29 IST)
ಬೆಂಗಳೂರು : ದುಬೈ ನಿಂದ ಬೆಂಗಳೂರು ಏರ್ ಪೋರ್ಟ್ ಗೆ ಬಂದಿದ್ದ ವ್ಯಕ್ತಿಯೊಬ್ಬ ಮೆಜಿಸ್ಟಿಕ್ ನಲ್ಲಿ ಸುತ್ತಾಡುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ. 


ಈತ ಮುಂಜಾನೆ 2.30ಕ್ಕೆ ಏರ್ ಪೋರ್ಟ್ ಗೆ ಬಂದಿದ್ದು, ಮುಂಜಾನೆ 4.30ಕ್ಕೆ ಏರ್ ಪೋರ್ಟ್ ನಿಂದ ಹೊರಗೆ ಬಂದಿದ್ದ. ಅಲ್ಲಿಂದ ಬೆಳಿಗ್ಗೆ 5 ಗಂಟೆಗೆ ಆಕಾಶ್ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿದ ನಂತರ ಸಿ ಕೆಟಗರಿ ಅಂತಾ ಚೀಟಿ ನೀಡಿ ಕಳುಹಿಸಲಾಗಿದೆ. ಹಾಗೇ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ.


ನಂತರ ಬಸ್ ಹತ್ತಿಕೊಂಡು ಮೆಜಿಸ್ಟಿಕ್ ಗೆ ಬಂದ ಶಂಕಿತ ವ್ಯಕ್ತಿ ಬೆಂಗಳೂರಿನಿಂದ ಚೆನ್ನೈಗೆ ತೆರಳಬೇಕಾಗಿತ್ತು. ಆದರೆ ಬಸ್ ಇಲ್ಲದ ಹಿನ್ನಲೆ ಮೆಜಿಸ್ಟಿಕ್ ಬಳಿ ಸುತ್ತಾಡುತ್ತಿದ್ದ. ಆತನ ಕೈಗೆ ಸೀಲ್ ಹಾಕಿದ್ದರಿಂದ ಯಾರೂ ರೂಂ ನೀಡ್ತಿಲ್ಲ ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :