ನವದೆಹಲಿ: ಕೊರೋನಾ ಎರಡನೇ ಅಲೆ ಮುಗಿಯಿತು ಎಂದು ಎಲ್ಲೆಂದರಲ್ಲಿ ಓಡಾಡುತ್ತಿರುವ ಜನಕ್ಕೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆ ನೀಡಿದೆ.ದೇಶದಲ್ಲಿ ಮೂರನೇ ಅಲೆ ಬರುತ್ತದೆ ಎಂಬುದು ಬರೀ ಊಹಾಪೋಹವಷ್ಟೇ ಎಂಬ ಉಡಾಫೆ ಬೇಡ. ಮೂರನೇ ಅಲೆ ಬರೋದು ಖಚಿತ. ಇದಕ್ಕೆ ಈಗಿನಿಂದಲೇ ಸಿದ್ಧರಾಗಿ ಎಂದು ಐಎಂಎ ಹೇಳಿದೆ.ಈಗಾಗಲೇ ಅನ್ ಲಾಕ್ ಆದ ಹಿನ್ನಲೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರಗಳು, ಪ್ರವಾಸೀ ತಾಣಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಜನ ನೂಕುನುಗ್ಗಲು