ಮೂರನೇ ಅಲೆ ಬರೋದು ಖಚಿತ: ಆರೋಗ್ಯ ಇಲಾಖೆ

ನವದೆಹಲಿ| Krishnaveni K| Last Modified ಗುರುವಾರ, 6 ಮೇ 2021 (10:06 IST)
ನವದೆಹಲಿ: ದೇಶದಲ್ಲಿ ಈಗ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ. ಇದಕ್ಕೇ ಜನ ತತ್ತರಿಸಿದ್ದಾರೆ. ಆದರೆ ಇನ್ನು ಮೂರನೇ ಅಲೆ ಬರಲಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
 > ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರ ಕೆ ವಿಜಯ ರಾಘವನ್ ಮೂರನನೇ ಅಲೆ ಬರುವುದು ಖಂಡಿತ. ಅದರ ಪರಿಣಾಮ ಇದಕ್ಕಿಂತ ಗಂಭೀರವಾಗಿರಲಿದೆ. ಎಚ್ಚರವಾಗಿರಿ ಎಂದಿದ್ದಾರೆ.>   ಮೂರನೆಯ ಅಲೆಯಲ್ಲಿ ಹರಡುವಿಕೆಯ ವೇಗ ಹೆಚ್ಚಬಹುದು. ಆದರೆ ಇಂಥಾ ಸಮಯದಲ್ಲೇ ಇದು ಬರುತ್ತದೆ ಎಂದು ಹೇಳಲಾಗದು. ಆದರೆ ಬರುವುದಂತೂ ಖಂಡಿತಾ. ಹಲವು ರಾಜ್ಯಗಳಲ್ಲಿ 1 ಲಕ್ಷಕ್ಕಿಂತಲೂ ಅಧಿಕ ಸಕ್ರಿಯ ಕೇಸ್ ಗಳಿವೆ ಎಂದು ಅವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :