ಮಕ್ಕಳಿಗೆ ಕೊವ್ಯಾಕ್ಸಿನ್: ಎರಡನೇ ಹಂತದ ಪ್ರಯೋಗಕ್ಕೆ ಸಿದ್ಧತೆ

ನವದೆಹಲಿ| Krishnaveni K| Last Modified ಮಂಗಳವಾರ, 20 ಜುಲೈ 2021 (09:21 IST)
ನವದೆಹಲಿ: ಕೊರೋನಾ ವಿರುದ್ಧ ಮಕ್ಕಳಿಗೂ ಲಸಿಕೆ ಕಂಡುಕೊಂಡಿರುವ ಭಾರತ್ ಬಯೋಟೆಕ್ ಸಂಸ್ಥೆ ಇದೀಗ 2-6 ವರ್ಷದೊಳಗಿನ ಮಕ್ಕಳಿಗೆ ಎರಡನೇ ಹಂತದ ಪ್ರಯೋಗಕ್ಕೆ ಮುಂದಾಗಿದೆ.
 

ಈಗಾಗಲೇ ಒಂದು ಡೋಸ್ ನೀಡಲಾಗಿದ್ದು, ಆ ಮಕ್ಕಳಿಗೆ ಎರಡನೇ ಡೋಸ್ ಪ್ರಯೋಗ ಮಾಡಲಾಗುತ್ತದೆ. ಮುಂದಿನ ವಾರ ಲಸಿಕೆ ಪ್ರಯೋಗ ಮಾಡುವ ಸಾಧ‍್ಯತೆಯಿದೆ.
 
ಈ ಹಂತದಲ್ಲೂ ಯಶಸ್ವಿಯಾದರೆ ಮುಂದೆ ಅಧಿಕೃತವಾಗಿ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ಸಿಗಲಿದೆ. ಹೀಗಾದಲ್ಲಿ 18 ವರ್ಷದೊಳಗಿನವರಿಗೂ ಸೆಪ್ಟೆಂಬರ್ ನಿಂದ ಲಸಿಕೆ ಸಿಗುವ ನಿರಿಕ್ಷೆಯಿದೆ. ಎರಡನೇ ಹಂತದ ಲಸಿಕೆ ಪ್ರಯೋಗವಾದ ಬಳಿಕ ಮಧ್ಯಂತರ ವರದಿ ನೀಡಲಾಗುತ್ತದೆ. ಇದನ್ನು ನೋಡಿಕೊಂಡು ಮುಂದಿನ ನಿರ್ಧಾರಕ್ಕೆ ಬರಬಹುದು.
ಇದರಲ್ಲಿ ಇನ್ನಷ್ಟು ಓದಿ :