ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮೂರನೇ ಅಲೆಗೆ ಸಿದ್ಧತೆ ನಡೆದಿದೆ. ಇದಕ್ಕೂ ಮೊದಲು ಸರ್ಕಾರ ವ್ಯಾಕ್ಸಿನ್ ನೀಡುವ ಕೆಲಸವನ್ನು ಭರದಿಂದ ಮಾಡುತ್ತಿದೆ. ಇತ್ತೀಚೆಗೆ ಒಂದೇ ದಿನದಲ್ಲಿ 80 ಲಕ್ಷ ಡೋಸ್ ಲಸಿಕೆ ನೀಡಿ ದಾಖಲೆ ಮಾಡಿದ್ದ ಭಾರತ ಈಗ ಒಟ್ಟಾರೆ ಲಸಿಕೆ ನೀಡಿದ ಪಟ್ಟಿಯಲ್ಲಿ ಅಮೆರಿಕಾಕ್ಕಿಂತಲೂ ಮುಂದೆ ಬಂದಿದೆ.ಆರೋಗ್ಯ ಇಲಾಖೆ ಪ್ರಕಾರ ಇದುವರೆಗೆ 32,36,63,297 ಜನರಿಗೆ ಲಸಿಕೆ ನೀಡಿಯಾಗಿದೆ. ಈ ಮೂಲಕ ಜಾಗತಿಕವಾಗಿ ಅಮೆರಿಕಾ ದೇಶವನ್ನೂ