ಮಂಗಳೂರು: ಚೀನಾದಲ್ಲಿ ನೂರಾರು ಜನರ ಪ್ರಾಣ ನುಂಗಿದ ಮಹಾಮಾರಿ ಕೊರೊನಾವೈರಸ್ ಜ್ವರ ಕೇರಳದ ಗಡಿ ಜಿಲ್ಲೆ ಕಾಸರಗೋಡಿಗೂ ಕಾಲಿಟ್ಟಿದೆ. ಕೇರಳದಲ್ಲಿ ಇದುವರೆಗೆ ಮೂವರು ಕೊರೊನಾವೈರಸ್ ಗೆ ತುತ್ತಾಗಿರುವ ವರದಿಯಾಗಿದೆ. ಇವರಲ್ಲಿ ತ್ರಿಶ್ಶೂರ್ ಮತ್ತು ಆಲಪ್ಪುಳದ ಇಬ್ಬರು ಸೇರಿದ್ದರು. ಇದೀಗ ಕಾಸರಗೋಡು ಜಿಲ್ಲೆಯ ಕಾಞಗಾಡ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳಿಗೆ ಮಹಾಮಾರಿ ವೈರಸ್ ತಗುಲಿರುವುದು ದೃಢಪಟ್ಟಿದೆ.ಚೀನಾದಿಂದ ಮರಳಿದ್ದ ವಿದ್ಯಾರ್ಥಿನಿ ಈಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಯ ಸ್ಥಿತಿ ಸ್ಥಿರವಾಗಿದೆ ಎಂದು