Widgets Magazine

ದೆಹಲಿಯಲ್ಲಿ ವೈದ್ಯನಿಗೆ ಕೊರೊನಾ ಸೋಂಕು ಪತ್ತೆ; ಚಿಕಿತ್ಸೆ ಪಡೆದವರಿಗೆ ಸೋಂಕು ತಗಲಿರುವ ಶಂಕೆ

ನವದೆಹಲಿ| pavithra| Last Modified ಗುರುವಾರ, 26 ಮಾರ್ಚ್ 2020 (10:32 IST)
ನವದೆಹಲಿ : ದೆಹಲಿಯಲ್ಲಿ ವೈದ್ಯನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ವೈದ್ಯನಿಂದ ಚಿಕಿತ್ಸೆ ಪಡೆದ ಜನರಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.


ದೆಹಲಿಯ ಮೊಹಲ್ಲಾ ಕ್ಲಿನಿಕ್ ವೈದ್ಯನಿಗೆ ಕೊರೊನಾ ಸೋಂಕು ತಗಲಿದ್ದು, ನಿತ್ಯ 100ರಿಂದ 150 ಜನರಿಗೆ ಈ ಚಿಕಿತ್ಸೆ ನೀಡಿದ್ದಾನೆ ಎನ್ನಲಾಗಿದೆ . ಆದಕಾರಣ ಈ ವೈದ್ಯನಿಂದ ಕನಿಷ್ಠ 1 ಸಾವಿರ ಜನರಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.


ಆದಕಾರಣ ವೈದ್ಯನ ಬಳಿ ಚಿಕಿತ್ಸೆ ಪಡೆದವರೆಲ್ಲರ ತಪಾಸಣೆ ನಡೆಸಲಾಗುತ್ತಿದ್ದು,  ಈ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆದವರೆಲ್ಲರೂ ತಪಾಸಣೆಗೆ ಬನ್ನಿ ಎಂದು  ದೆಹಲಿಯ ಕುಂದಾ ನಗರಿಯಲ್ಲಿ ದೆಹಲಿ ಸರ್ಕಾರ ನೋಟಿಸ್  ಹಂಚುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :