Widgets Magazine

ಬಿಹಾರದ ಬಾಲಕಿಗೆ ಕೊರೊನಾವೈರಸ್ ಶಂಕೆ

ನವದೆಹಲಿ| Krishnaveni K| Last Modified ಸೋಮವಾರ, 27 ಜನವರಿ 2020 (11:11 IST)
ನವದೆಹಲಿ: ಚೀನಾದಲ್ಲಿ ವ್ಯಾಪಕವಾಗಿ ಹರಡಿರುವ ಕೊರೊನಾವೈರಸ್ ಭಾರತದಲ್ಲೂ ಆತಂಕ ತಂದಿದೆ. ಈ ನಡುವೆ ಬಿಹಾರದ ಬಾಲಕಿಯೊಬ್ಬಳಿಗೆ ವೈರಸ್ ತಗುಲಿದ ಶಂಕೆಯಿದ್ದು, ಆಕೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 
ಚೀನಾದಿಂದ ಮರಳಿದ್ದ ಬಾಲಕಿಯಲ್ಲಿ ವೈರಸ್ ನ ಕೆಲವು ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಆಕೆಯನ್ನು ಬಿಹಾರದ ಚಪ್ರಾದಲ್ಲಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿದ್ದು, ಪರೀಕ್ಷೆ ನಡೆಸಲಾಗುತ್ತಿದೆ.
 
ನಿನ್ನೆಯವರೆಗೆ ಭಾರತದಲ್ಲಿ ಯಾವುದೇ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ ಇದೀಗ ಬಿಹಾರದ ಬಾಲಕಿಗೆ ವೈರಸ್ ತಗುಲಿರುವ ಸಾಧ‍್ಯತೆ ವರದಿಯಾಗುತ್ತಿದ್ದಂತೇ ದೇಶದಲ್ಲೂ ಭೀತಿ ಆವರಿಸಿದೆ.
ಇದರಲ್ಲಿ ಇನ್ನಷ್ಟು ಓದಿ :