ಭ್ರಷ್ಟರು ಮತ್ತು ಅಪ್ರಾಮಾಣಿಕರಿಗೆ ಡಿಸೆಂಬರ್ 30ರ ನಂತರ ಕಾದಿದೆ ಮಾರಿಹಬ್ಬ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ಮೋದಿ, ನೋಟು ನಿಷೇಧ ಬಿಕ್ಕಟ್ಟು ಅಂತ್ಯವಾಗಲು ದೇಶದ ಜನತೆಗೆ 50 ದಿನದ ಸಮಯ ಕೇಳಿದ್ದೇನೆ. ದೇಶದ ಜನತೆ ನನಗೆ ಬೆಂಬಲ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಾಮಾಣಿಕರಾಗಿರುವ ಜನರ ಸಂಕಷ್ಟಗಳು ನಿಧಾನವಾಗಿ ಅಂತ್ಯಗೊಳ್ಳಲಿವೆ. ಡಿಸೆಂಬರ್ 30 ರವರೆಗೆ ಬ್ಯಾಂಕ್ಗಳಲ್ಲಿ